ನಮ್ಮ ಲಚ್ಚಿ ಸ್ಟಾರ್ ಸುವರ್ಣದಲ್ಲಿ ಪ್ರಸಾರವಾಗುತ್ತಿದ್ದ ಭಾರತೀಯ ಕನ್ನಡ ಭಾಷೆಯ ದೈನಂದಿನ ಧಾರಾವಾಹಿ ಆಗಿದ್ದು, ಸೋಮವಾರದಿಂದ ಶನಿವಾರದವರೆಗೆ ರಾತ್ರಿ 8:00ಕ್ಕೆ ಪ್ರಸಾರವಾಗುತ್ತಿತ್ತು. ಇದು 6 ಫೆಬ್ರವರಿ 2023 ರಿಂದ 6 ಏಪ್ರಿಲ್ 2024ರವೆಗೆ ಪ್ರಸಾರಗೊಂಡಿತು . ಈ ಕಾರ್ಯಕ್ರಮವು ಬಂಗಾಳಿ ಭಾಷೆಯ ಪೋಟಲ್ ಕುಮಾರ್ ಗಾನಾವಾಲ ಧಾರಾವಾಹಿಯ ಅಧಿಕೃತ ರೀಮೆಕ್ ಆಗಿದೆ. ಧಾರಾವಾಹಿಯಲ್ಲಿ ವಿಜಯ್ ಸೂರ್ಯ, ನೇಹಾ ಗೌಡ ಮತ್ತು ವಾಣಿಶ್ರೀ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. == ಕಥಾ ಹಂದರ == ಉದಯೋನ್ಮುಖ ಗಾಯಕ ಸಂಗಮ್ ಸಂಪಿಗೆಪುರದಲ್ಲಿ ವಾಸಿಸುವ ಹಳ್ಳಿ ಹುಡುಗಿ ಗಿರಿಜಾ ಎಂಬವಳನ್ನು ಪ್ರೀತಿಸುತ್ತಾನೆ ಮತ್ತು ರಹಸ್ಯವಾಗಿ ಮದುವೆಯಾಗುತ್ತಾನೆ. ಆದರೆ ಗಿರಿಜಾ ಮತ್ತು ಅವನ ವೃತ್ತಿಜೀವನದ ನಡುವೆ ಆಯ್ಕೆ ಮಾಡುವ ಪರಿಸ್ಥಿತಿ ಬರುತ್ತದೆ. ಆದರೆ ಗಿರಿಜಾ ಗರ್ಭಿಣಿ ಎಂದು ತಿಳಿಯದೆ ಅವಳನ್ನು ಬಿಟ್ಟು ವೃತ್ತಿಜೀವನವನ್ನು ಆಯ್ಕೆ ಮಾಡುತ್ತಾನೆ. ನಂತರ ಅವನು ಶ್ರೀಮಂತ ದೀಪಿಕಾಳನ್ನು ಮದುವೆಯಾಗುತ್ತಾನೆ. ದೀಪಿಕಾ ತನ್ನ ಮಗಳು ರಿಯಾಳನ್ನು ಮುದ್ದಿನಿಂದ ಬೆಳಸಿರುತ್ತಾಳೆ. ಲಚ್ಚಿ ಹಳ್ಳಿಯಲ್ಲಿ ಹುಟ್ಟಿ ಬೆಳೆದವಳು ಮತ್ತು ಹಾಡುವುದೆಂದರೆ ಅವಳಿಗೆ ಪಂಚಪ್ರಾಣವಾಗಿದೆ. ಆದರೆ ಅವಳ ತಾಯಿ ಗಿರಿಜಾಗೆ ಇದು ಇಷ್ಟವಿಲ್ಲ. ಲಚ್ಚಿ ಹಳ್ಳಿಯಲ್ಲಿ ಅವಳ ತಾಯಿ, ಸೋದರ ಮಾವ ಮತ್ತು ಅತ್ತೆಯೊಂದಿಗೆ ವಾಸಮಾಡುತ್ತಿರುತ್ತಾಳೆ. ಲಚ್ಚಿಗೆ ತನ್ನ ತಂದೆ ಯಾರೆಂದು ತಿಳಿದಿಲ್ಲ. ಲಚ್ಚಿಗೆ ಹಾಡುವ ಕೌಶಲ್ಯವು ಅವಳ ತಂದೆಯಿಂದ ಆನುವಂಶಿಕವಾಗಿ ಬಂದಿದೆ. ಖ್ಯಾತ ಗಾಯಕ ಸಂಗಮ್ ತನ್ನ ತಂದೆ ಎಂದು ತಿಳಿದಿಲ್ಲ, ಅವರಂತೆ ಗಾಯಕಿಯಾಗಲು ಬಯಸುತ್ತಾಳೆ. ಶಾಂತಾ (ಗಿರಿಜಾಳ ಅತ್ತಿಗೆ) ಲಚ್ಚಿಯನ್ನು ದ್ವೇಷಿಸುತ್ತಾಳೆ, ಆದರೆ ಅವಳ ಪ್ರತಿಭೆಯನ್ನು ಬಳಸಿಕೊಂಡು ಲಾಭ ಮಾಡಿಕೊಳ್ಳಲು ಬಯಸುತ್ತಾಳೆ. ಕ್ಯಾನ್ಸರ್ ನಿಂದ ಬಳಲುತ್ತಿರುವ ಗಿರಿಜಾಳಿಗೆ ದೀಪಿಕಾಳ ಕಾರು ಡಿಕ್ಕಿ ಹೊಡೆದ ಕಾರಣದಿಂದ ಅಪಘಾತದಲ್ಲಿ ಸಾಯುತ್ತಾಳೆ. ಶಾಂತಾ ತನ್ನ ಲಾಭಕ್ಕಾಗಿ ಲಚ್ಚಿಯನ್ನು ಮಾರಾಟ ಮಾಡಲು ಯೋಜಿಸುತ್ತಾಳೆ. ಆದರೆ ಲಚ್ಚಿಯ ತಾಯಿಯ ಅಣ್ಣ ಅವಳನ್ನು ತಪ್ಪಿಸಿಕೊಳ್ಳಲು ಸಹಾಯ ಮಾಡುತ್ತಾನೆ.ಲಚ್ಚಿಯು ತನ್ನ ತಂದೆಯನ್ನು ಹುಡುಕಲು ಹಂಬಲಿಸುತ್ತಾಳೆ. ಹುಡುಗನ ವೇಷದಲ್ಲಿ, ಲಚ್ಚಿ ಬೆಂಗಳೂರಿಗೆ ಪ್ರವೇಶಿಸಿ ಆಕಸ್ಮಿಕವಾಗಿ ಸಂಗಮ್ ಮನೆಗೆ ತಲುಪುತ್ತಾಳೆ. ರಿಯಾಳನ್ನು ಯಶಸ್ವಿ ಗಾಯಕಿಯನ್ನಾಗಿ ಮಾಡಲು ದೀಪಿಕಾ ಲಚ್ಚಿ ಧ್ವನಿಯನ್ನು ಬಳಸುತ್ತಾಳೆ. ಆದಾಗ್ಯೂ, ರಿಯಾಗೆ ಧ್ವನಿ ನೀಡುತ್ತಿರುವುದು ಲಚ್ಚಿ ಎಂಬುಂದನ್ನು ಸಂಗಮ್ ತಿಳಿದುಕೊಳ್ಳುತ್ತಾನೆ ಮತ್ತು ಅವಳಿಗೆ ತರಬೇತಿ ನೀಡಲು ನಿರ್ಧರಿಸುತ್ತಾನೆ. ಕಥೆ ಮುಂದುವರಿಯುತ್ತಾ; ಲಚ್ಚಿ ಹುಡುಗ ಅಲ್ಲ ಹುಡುಗಿ ಎಂಬ ವಿಚಾರ ಸಂಗಮ್ ಮತ್ತು ಮನೆಯವರಿಗೆ ತಿಳಿಯುತ್ತದೆ. == ಪಾತ್ರವರ್ಗ == === ಮುಖ್ಯಪಾತ್ರಗಳು === ಸಾಂಘವಿ ಕಾಂತೇಶ್: ಲಚ್ಚಿ ಪಾತ್ರದಲ್ಲಿ. ಸಂಗಮ್ ಮತ್ತು ಗಿರಿಜಾ ಮಗಳಾಗಿ. ವಿಜಯ್ ಸೂರ್ಯ : ಸಂಗಮ್ ಪಾತ್ರದಲ್ಲಿ. ಲಚ್ಚಿಯ ಹೆತ್ತತಂದೆಯಾಗಿ. ಐಶ್ವರ್ಯ ಸಿಂಧೂಗಿ : ದೀಪಿಕಾ ಪಾತ್ರದಲ್ಲಿ. ಸಂಗಮ್ ಎರಡನೇ ಹೆಂಡತಿಯಾಗಿ. ರಿಯಾ ಹೆತ್ತತಾಯಿಯಾಗಿ. ಸಾರಾ ಅಣ್ಣಯ್ಯ: ಪಾತ್ರ ಬದಲಾವಣೆಯಾಗುವ ಮೊದಲು === ಇತರೆ ಪಾತ್ರಗಳು === ನೇಹಾ ಗೌಡ: ಗಿರಿಜಾ ಮತ್ತು ಜಾಜಿ ಪಾತ್ರದಲ್ಲಿ. ಗಿರಿಜಾ ಲಚ್ಚಿ ಹೆತ್ತತಾಯಿಯಾಗಿ ಮತ್ತು ಸಂಗಮ್ ಮೊದಲನೇಯ ಹೆಂಡತಿಯಾಗಿ. ಶ್ರೀದಿಶಾ: ರಿಯಾ ಪಾತ್ರದಲ್ಲಿ. ದೀಪಿಕಾ ಮಗಳು ಮತ್ತು ಸಂಗಮ್ ಸಾಕು ಮಗಳು. ವಾಣಿಶ್ರೀ: ಜೆಜೆ ಆಲಿಯಾಸ್ ಜ್ವಾಲಿ ಜಾನಕಿ ಪಾತ್ರದಲ್ಲಿ. ದೀಪಿಕಾ ಹೆತ್ತತಾಯಿಯಾಗಿ, ರಿಯಾ ಅಜ್ಜಿಯಾಗಿ. ಸಂಗಮ್ ಅತ್ತೆಯಾಗಿ. ಸುಶ್ಮೀತಾ: ಶಾಂತವ್ವ ಪಾತ್ರದಲ್ಲಿ. ಲಚ್ಚಿ ಸೋದರ ಅತ್ತೆಯಾಗಿ ವಿಕಾಸ್ ಕಾರ್‌ಗೋಡ್: ಸಾಗರ್ ಪಾತ್ರದಲ್ಲಿ. ಸಂಗಮ್ ಅಣ್ಣನಾಗಿ. ಮಾನಸ ಭಟ್: ಮಾನಸ ಪಾತ್ರದಲ್ಲಿ, ಸಾಗರ್ ಹೆಂಡತಿಯಾಗಿ. ಸಂಗಮ್ ಅತ್ತಿಗೆಯಾಗಿ. ದೀಪಾ ರವಿಶಂಕರ್: ಶಾರದ ಪಾತ್ರದಲ್ಲಿ. ಸಾಗರ್ ಮತ್ತು ಸಂಗಮ್ ಹೆತ್ತತಾಯಿಯಾಗಿ. ಮಾನಸ ಮತ್ತು ದೀಪಿಕಾ ಅತ್ತೆಯಾಗಿ. ವಿನಯ್ ಗೌಡ: ಭದ್ರಿ ಪಾತ್ರದಲ್ಲಿ. ದೀಪಿಕಾ ಹಳೆಪ್ರೇಮಿಯಾಗಿ, ರಿಯಾ ಸ್ವಂತ ತಂದೆಯಾಗಿ. ಖ್ಯಾತ ರಾಪರ್. ?: ಗೋಪಾಲನ ಪಾತ್ರದಲ್ಲಿ. ಲಚ್ಚಿ ಸೋದರ ಮಾವನಾಗಿ. ಶಾಂತಳಾ ಗಂಡನಾಗಿ. ಸುಗ್ಗಿ ತಂದೆಯಾಗಿ. ?: ಸುಗ್ಗಿ ಪಾತ್ರದಲ್ಲಿ. ಗೋಪಾಲ ಹಾಗೂ ಶಾಂತಳ ಮಗಳಾಗಿ. == ರೂಪಾಂತರಗಳು == == ಉಲ್ಲೇಖಗಳು ==